ದಾರ ಮಗ ಎಲೆ ಗೋಪಿ
( ರಾಗ ಸೌರಾಷ್ಟ್ರ. ಅಟ ತಾಳ)
ದಾರ ಮಗ ಎಲೆ ಗೋಪಿ, ದಾರ ಮಗನೆ
ಒರಳನೆಳೆಯುತಂಬೆಕಾಲನಿಕ್ಕುತ ಬಹವ || ಪ||
ಕಿರುಜಡೆ ಮುಂಗುರುಳು ಅರಳಲೆ ಮಾಗಾಯಿ
ಹಾರ ಹೀರ ಕೌಸ್ತುಭ ಸರವ ಹಾಕಿದವನಿವ ||
ಕೊರಳ ಹುಲಿಯುಗುರು ಶ್ರೀಗಂಧ ತುಳಸಿ
ಸುರರ ಸೋಲಿಪ ಮುದ್ದು ಸುರಿದು ನಲಿದಾಡುವ ||
ಕರುಣಾಕರ ವರದ ಪುರಂದರವಿಠಲ
ವರ ಭಾಗವತರ ಕೇರಿಯೊಳ್ ನಲಿದಾಡುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments