ಆಚಾರಿಯರೆಂಬವರ

ಆಚಾರಿಯರೆಂಬವರ

( ರಾಗ ಮುಖಾರಿ. ಅಟ ತಾಳ) ಆಚಾರಿಯರೆಂಬವರ ಇವರ ನೋಡಿ || ಆಚಾರ ಬಲ್ಲವರೆ ಆಚಾರ್ರು || ಆ ಎಂದರೆ ಅತಿ ತತ್ವವ ತಿಳಿದವರು ಅದ್ವೈತ ಮತ ಧ್ವಂಸ ಮಾಡುವರು ಅತಿಥಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು ಆಯುತ ವೃತ್ತಿಯನ್ನೆ ಮಾಡುವರು || ಚಾ ಎಂದರೆ ಚಂಚಲಾತ್ಮವನೆ ಅಳಿದವರು ಚೆನ್ನಾಗಿ ವೇದ ಶಾಸ್ತ್ರವನೆ ಓದಿದವರು ಚಲನೆಯಿಲ್ಲದೆ ಗುರು ಹಿರಿಯರಿಗೆ ಎರಗುವರು ಚಾನಸ ಬಿಟ್ಟವರು ಆಚಾರಿಯರು || ರು ಎಂದರೆ ಋಣವ ಮಾಡದಿದ್ದವರು ರಿಪುಮಿತ್ರ ಸಮರೆಂದು ನೋಡುವರು ರೌಪ್ಯ ಸುವರ್ಣ್ವನು ಮೃತ್ತಿಕೆಯೆಂದು ನೋಡುವರು ರಮಾಧವ ಪುರಂದರವಿಠಲನ ಬಲ್ಲವರೇ ಆಚಾರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು