ಆಡಿದನೋಕುಳಿಯ

ಆಡಿದನೋಕುಳಿಯ

( ರಾಗ ಪೂರ್ವಿ. ಅಟ ತಾಳ) ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ|| ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ || ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ ಬಂದರು ಹೊರಗಿನ್ನಾರೇರಾಡುತಂದಚೆಂದದಿ ಓಕುಳಿಯ|| ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ ಬಟ್ಟ ಕುಚಕ್ಕೆ ಕಣ್ಣಿಟ್ಟು ಒಗೆದನು ಕುಟ್ಟಿದನೋಕುಳಿಯ|| ಆರ್ ‍ಹತ್ತುಸಾವಿರ ಗೋಪ ಸ್ತ್ರೀಯರೆಲ್ಲರ ಕೂಡೆ ಮಾರನಯ್ಯ ಶ್ರೀ ಪುರಂದರವಿಠಲ ಹರಿಸಿ ಓಕುಳಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು