ಆವನಾವನು ಕಾಯ್ವ

ಆವನಾವನು ಕಾಯ್ವ

( ರಾಗ ಕಾಂಭೋಜ. ರೂಪಕ ತಾಳ) ಆವನಾವನು ಕಾಯ್ವ ಅವನಿಯೊಳಗೆ ||ಪ|| ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||ಅ|| ಆವ ತಂದೆಯು ಸಲಹಿದನು ಪ್ರಹ್ಲಾದನ್ನ ಆವ ತಾಯಿಯು ಸಲಹಿದಳು ಧ್ರುವನ ಆವ ಸೋದರರು ಈಡೇರಿಸಿದರು ವಿಭೀಷಣನ ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ || ಆವ ಬಂಧುಗಳು ಸಲಹಿದರು ಗಜರಾಜನ್ನ ಆವ ಪತಿಯಾದ ದ್ರೌಪದಿಕಾಲಕೆ ಆವಾವ ಸಖನಾದ ಪಾಂಡವರಸಮಯಕ್ಕೆ ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ || ಆವನಾಧಾರ ಅಡವಿಯೊಳಿದ್ದ ಮೃಗಗಳಿಗೆ ಆವ ಪೋಷಕ ಗರ್ಭದ ಶಿಶುವಿಗೆ ಆವ ಪಾಲಿಪ ಪಶುಪಕ್ಷಿ ಮುಖ್ಯಜೀವರಿಗೆ ದೇವ ಶ್ರೀ ಪುರಂದರವಿಠಲನ್ನದೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು