ಬಂದೆ ರಂಗಯ್ಯ ನಿನ್ನ ಬಳಿಗೆ
( ರಾಗ ಆನಂದಭೈರವಿ. ಅಟ ತಾಳ)
ಬಂದೆ ರಂಗಯ್ಯ ನಿನ್ನ ಬಳಿಗೆ ||ಪ||
ಎಲ್ಲಿಗ್ಹೋದರು ಸುಖವಿಲ್ಲ, ಅವ-
ರೆಲ್ಲರ ಸೇವೆಯ ಮಾಡ ಬೇಕಲ್ಲ
ಒಳ್ಳೆದಾಯಿತು ಎಂಬೊರಿಲ್ಲ, ರಂಗ, ಎ-
ನ್ನಲ್ಲಿ ತಪ್ಪುಗಳೆಣಿಸುವರೆಲ್ಲ ||
ಕಸಮುಸುರೆಯ ಮಾಡಲಾರೆ
......................... (?)
ಸೊಸೆಯ ಮಗನ ಮಾತು ಬೇರೆ ,ಇಂಥಾ
ಹಸಗೆಟ್ಟ ಸಂಸಾರ ನಾ ಮಾಡಲಾರೆ
ಸೊಂಟಿಬೇರಿಗೆ ಕಾಸಿಲ್ಲ, ಎನಗೆ
ಸೊಟ್ಟಾದ ನೋವು ಘನವಾಯಿತಲ್ಲ
ಕಂಠಕ್ಕೆ ಬಂದಿದೆಯಲ್ಲ, ಕೈ
ಇಟ್ಟು ರೊಕ್ಕಗಳಾರು ಕೊಡುವವರಿಲ್ಲ ||
ಇದ್ದ ಕಡೆ ಇರಲೀಸರು , ಅಲ್ಲಿಂ
ದೆದ್ದು ಬಂದರೆ ಸಿಟ್ಟುಗಾರರು ಬಿಡರು
ಮಧ್ಯಾಹ್ನಕ್ಕನ್ನದ ತೊಡರು ಒಂ-
ದು ದುಡ್ಡು ಕೇಳಿದರ್ಯಾರು ಸಾಲವ ಕೊಡರು ||
ಸೋಮವಾರದ ವ್ರತವೆನಗೆ ,ಒಂದು
ದೀವಿಗೆ ಹಚ್ಚಲು ತೆರವಿಲ್ಲವಲ್ಲ
ಭಾವಿಸಿ ನೋಡುವರಿಲ್ಲ, ನಮ್ಮ
ಪುರಂದರವಿಠಲನೆ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments