ಬಾರಯ್ಯ ಮನೆಗೆ ರಂಗಯ್ಯ
( ರಾಗ ಪಂತುವರಾಳಿ/ಕಾಮವರ್ಧಿನಿ. ಛಾಪು ತಾಳ)
ಬಾರಯ್ಯ ಮನೆಗೆ ರಂಗಯ್ಯ ನೀನು ||ಪ||
ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ
ಜಾರಚೋರ ಕೃಷ್ಣ ಜಾನಕೀಪತಿ ರಾಮ ||ಅ||
ನಂದ ನಂದನ ನವನೀತ ಚೋರ ಕೃಷ್ಣ
ಮಂದರೊದ್ಧರನೆ ಮಾಧವರಾಯ ರಾಮ ||
ಗೋಕುಲದೊಳಗೆ ಗೋಪಿಯರ ಕೂಡಿ
ಲೋಕ ನೋಡಲವರ ಕಾಕುಮಾಡಿ ||
ಹಳ್ಳಿಪಳ್ಳಿಗಳೊಳು ಎಲ್ಲ ಮೊಸರು ಹಾಲು ಬೆಣ್ಣೆ
ಕೊಳ್ಳೆಯಾಡಿ ಗೋಪಿ ಕುಚ ಪಿಡಿದ ಕೃಷ್ಣ ||
ಅನಂತ ಪದುಮನಾಭ ಅಪ್ರಮೇಯ ಹೃಷಿಕೇಶ
ದಾನವಾಂತಕ ರಂಗ ದಶರಥ ಪುತ್ರ ರಾಮ ||
ಪರಮ ಪವಿತ್ರ ರಾಮ ಭದ್ರಾಚಲಧೀಶ
ವರದ ಶ್ರೀ ಪುರಂದರವಿಠಲ ರಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments