ದ್ವಾರಕಾಪುರದ ಚಂದ್ರಾನನೆಯರು

ದ್ವಾರಕಾಪುರದ ಚಂದ್ರಾನನೆಯರು

( ರಾಗ ಮೋಹನ ಆದಿ ತಾಳ) ದ್ವಾರಕಾಪುರದ ಚಂದ್ರಾನನೆಯರು ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ|| ಹಗಲೆಲ್ಲ ಹರಿಯ ಆಹ್ನಿಕವು ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?) ಕಳೆದು ಮಿಗೆ ಹರುಷದಿ ರಾತ್ರಿಯಲಿ ಹರಿಯೊಡನೆ ನಗೆ ನುಡಿಯಿಂದ ದಣಿಯದಲೆ ಉದಿಸಿದನೆಂದು || ವನಜನಾಭ ಸತ್ಕರ್ಮಂಗಳ ಹಗಲೆ ಪೂರಯಿಸಿ ವನಿತೆಯರು ಶೃಂಗಾರಯುಕ್ತರಾಗಿ ಮನಸಿಜಪಿತಗೆ ಶೃಂಗಾರ ಮಾಡಿ ಸಂಗೀತ- ವನು ಪಾಡುತಿರೆ ಅರುಣ ಉದಿಸಿದನೆಂದು || ಕೋಳಿ ಕಾಗೆ ಖಗಕುಲವನೆಲ್ಲನು ಮುಂದೆ ಊಳಿಗಕೆ ಭಟರ ಮಾಡಿಕೊಂಡು ಬಾಹ ಏಳೈದು ಪೆಸರ ನಗರದವಗೆ ನಮ್ಮ ಗೋಳು ತಾಗಲಿಯೆಂದು ಕೋಪದಿಂದನವರತ || ನಮ್ಮ ಪುರದಲಿ ಮಾತ್ರ ನಾಲ್ಕೆಂಟು ದಿನಕೊಮ್ಮೆ ಹೆಮ್ಮೆಯಿಂದುದಿಸಿದರೆ ಹಾನಿ ಬಹುದೆ ನಮ್ಮ ಸ್ವಾಮಿಗೆ ಮೋದ ಮಾಡುವುದೆಲ್ಲವನು ತಮ್ಮ ಸ್ವಾಮಿಯ ಸೇವೆಯಲ್ಲವೆ ತಮನೆಂದು || ಈ ವಿಧಗಳಿಂದ ರವಿಯ ದೂರಿ ಹದಿನಾರು ಸಾವಿರದ ನೂರೆಂಟು ಸತಿಯರೆಲ್ಲ ದೇವರ ದೇವ ಶ್ರೀಪುರಂದರವಿಠಲನ್ನ ದೇವೇಶನೆಂದು ತಿಳಿದನವರತ ಭಜಿಸುವರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು