ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ
( ರಾಗ ಕೇದಾರಗೌಳ. ಅಟ ತಾಳ)
ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ
ಕಳ್ಳ ಕೃಷ್ಣನ ಹಾವಳಿ ಘನವಾಯಿತು ||ಪ||
ನೆಲುವು ನಿಲುಕದೆಂದಿಡುವೆನೆ ಈ
ಬೆಳಿಯಾಲಾಜಾಂಡ ವಾಡಿಯೊಳಿಲ್ಲ
ತಿಳಿಯದೆ ಕೆಳದಲ್ಲಿರಿಸುವೆನೆ ಈ
ಬೆಳಕುಗಳೆಲ್ಲ ಇವನ ಕಂಗಳಾಧಳಾ ||
ಎವೆ ಇಡದಲ್ಲಿ ಕಾದಿರುವೆನೆ ನೋಡೆ
ದಿವಿಜಗಳೆಲ್ಲ ಇವನ ಮಾಯ
ಅವನೀಶ್ವರಗೆ ಮೊರೆಯಿಡುವೆ ಅಕ್ಕಾ
ಅವನಿಟ್ಟ ಬಂಟರಿಂದ್ರಾದಿಗಳೆಲ್ಲರು ||
ಈಗಲೆ ಇನಿತು ಮಾಳ್ಪವನೆಂತೊ ಮುಂದೆ
ಅಗಲಿಸುವಾಗ ತನುವನು
ಕೂಗಿ ಹೇಳಲು ಮತ್ತೆ ಕೇಡಮ್ಮ , ಮುಂದೆ
ಹೇಗೆ ಪುರಂದರವಿಠಲನಟ್ಟುಳಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments