ಬೈಯಿರೋ ಬೈಯಿರೋ

ಬೈಯಿರೋ ಬೈಯಿರೋ

( ರಾಗ ಕಾಪಿ. ಏಕ ತಾಳ) ಬೈಯಿರೋ ಬೈಯಿರೋ ಮನಮುಟ್ಟಿ ಬೈಯಿರೋ ||ಪ|| ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೋ ||ಅ|| ಅವರು ಇವರು ಬೈದರೆಂಬೊ ಹೀನ ಬುದ್ಧಿ ನನಗಿಲ್ಲ ನಾ ಮಾಡಿದಷ್ಟು ಪಾಪವನ್ನು ಅಳೆದು ಹಾಕಿ ಹಂಚಿಕೊಳ್ಳಿರೋ || ಇರುವೆ ನೊಣ ಕೊಂದ ಪಾಪ ಪರನಿಂದೆಯ ಮಾಡಿದ ಪಾಪ ಹೊಲೆಯ ಪಾಪ ಕೆಲವು ಉಂಟು ಅಳೆದು ಹಾಕಿ ಹಂಚಿಕೊಳ್ಳಿರೋ || ಅತ್ತೆ ಮಾವನ ಬೈದ ಪಾಪ ಮತ್ತೆ ಹಿರಿಯರ ನುಡಿದ ಪಾಪ ಕರ್ತು ಶ್ರೀ ಪುರಂದರವಿಠಲನ್ನ ಚಿತ್ತದಲ್ಲಿ ನೆನೆಯದ ಪಾಪ||
ದಾಸ ಸಾಹಿತ್ಯ ಪ್ರಕಾರ
ಬರೆದವರು