ಬೇಡ ಪರಸತಿಸ್ನೇಹ

ಬೇಡ ಪರಸತಿಸ್ನೇಹ

( ರಾಗ ಮೋಹನ. ಝಂಪೆ ತಾಳ) ಬೇಡ ಪರಸತಿಸ್ನೇಹ, ಭ್ರಷ್ಟನಾದ್ಯೋ ಮನುಜ ನೋಡಿಕೋ ನೊಂದವರನು ||ಪ|| ಧರಣಿಯೊಳಗೆ ಜಲಂಧರನು ಗೌರೀಗಣಿಕಿ ಹರನಿಂದ ಹತನಾದನು ಮೂರು ಲೋಕವ ಗೆದ್ದ ಮೂಢ ರಾವಣ ಬಿದ್ದ ಹೀನ ಕೀಚಕನು ಕೆಟ್ಟ, ಭ್ರಷ್ಟ || ಕಾಕಾಸುರನ ನೋಡು ಏಕಾಕ್ಷಿಯಾದನು ಪಾಕಶಾಸನನ ನೋಡು ಆಕಾಶದಲಿ ಚಂದ್ರನಾಕಾರವನೆ ನೋಡು ಯಾಕಲ್ಪಕಿನ್ನು ಬಿಡದು, ಕೆಡದು || ಸಾರದಲಿ ಸತ್ಸಂಗಿರಲು ದೂರ ದುತ್ಸಂಗ್ಹೋಗಿ ಪೂರಯ್ಸು ಪುಣ್ಯ ಫಲದಿ ಸೇರಿದ ಪಾಪ ಪರಿಹಾರ ಮಾಡುವ ನಮ್ಮ ಧೀರ ಪುರಂದರವಿಠಲ ಕರುಣದಲಿ, ಪೊರೆವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು