ಬವ್ವು ಬಂದಿತಲ್ಲ.
( ರಾಗ ಪೀಲು. ಆದಿ ತಾಳ)
ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ||
ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ||
ಸೆರಗು ಪಿಡಿದು ನೀ ಹೇಳದೆ ಮಲಗೊ
ತಿರುಗಿದರೆ ನೋಡು ಮತ್ತಿಲ್ಲೆ
ಬೂದಿಯ ಹಚ್ಚಿದೆ ಕೂದಲು ಬಿಚ್ಚಿದೆ
ಸ್ವಾದವ ಕಂಡು ಬಂದಿತಿಲ್ಲಿ ||
ಹಿಡಿದ ತ್ರಿಶೂಲ ಪಿಡಿದ ಕಪಾಲ
ಮುಕ್ಕಣ್ಣಲಿ ಕಿಡಿಯುದುರಿಸುತ
ಹಾವು ಕೊರಳಲಿಟ್ಟು ಹುಲಿಯ ಚರ್ಮವ ಹೊದ್ದು
ಸುತ್ತಲಿ ಬರುತಿದೆ ಬವ್ವುತನ ದಂಡು ||
ಕಪ್ಪುಗೊರಳ ಬವ್ವು ಒಪ್ಪುವ ಎತ್ತನೇರಿ
ತಪ್ಪದೆ ಬಂದೀತು ಬಿಡು ಮುನ್ನೆ
ಅಪ್ಪ ಕೃಷ್ಣರಾಯ ಪುರಂದರವಿಠಲನೆ
ಒಪ್ಪಿಸಿ ಕೊಡುವೆನು ಈಗಲೆ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments