ಬಾರೋ ನೀನೆನ್ನ ಮನ ಮಂದಿರಕ್ಕೆ

ಬಾರೋ ನೀನೆನ್ನ ಮನ ಮಂದಿರಕ್ಕೆ

( ರಾಗ ಮೋಹನ. ಆದಿ ತಾಳ) ಬಾರೋ ನೀನೆನ್ನ ಮನ ಮಂದಿರಕ್ಕೆ, ತಡಮಾಡುವದೇಕೆ ಮಾರಜನಕ ಹರಿ ನಿನ್ನಗ್ಗಳಿಕೆ, ಸ್ಮರಿಸುವೆ ಕ್ಷಣ ಕ್ಷಣಕೆ ||ಪ|| ಬಾರೊ ಬಾರೋ ಮಧುರಾಪುರಿ ಬಿಟ್ಟು, ಸೇರಿಕೊಳ್ಳದಿರೋ ವರಕರಿಪುರವ ||ಅ|| ಕುಂತೀ ಮಕ್ಕಳ ಮನೆಗ್ಹೋದೇನೆಂದೆ, ಅವರೈದು ಮಂದಿ ಸಂತೋಷ ಪಡಿಸುವರೆಂದು ತಿಳಿದೆ, ಎಂಜಲ ಬಳಿದೆ ಕಂತುಪಿತ ಕೇಳೊ ಮುಂದೆ ನೀ ಮುದದಿ, ಬಂಡಿಯ ಹೊಡೆದೆ ಇಂತು ಪರಿಯ ನಾನೆಂತು ಪೇಳಲೋ ಕಾಂತ ಎನ್ನ ಮನದಂತರ್ಯಾಮಿ || ಗೋಕುಲದಲ್ಲಿರೆ ನಂದಗೋಪ, ನಿನ್ನ ಕೈಯಿಂದ ಆಕಳ ಕಾಯಿಸುವನು ಅವ ಪಾಪ, ಅದು ಅಲ್ಲದಲೆ ನೀ ಕೇಳೋ ಗೋಪಿಯರ ಅಪಲಾಪ, ಲಾಲಿಸು ನೀ ಭೂಪ ಈ ಕರೆಕರೆಯೊಳು ನೀ ಕೂಡಿರುವುದು ಯಾಕೆಲೊ ಕಾಂತನೆ ಮಮ ಹೃತ್ಕಮಲಕೆ || ದುಷ್ಟ ಮಾವನ ಮನೆಗ್ಹೋಗಲು ಬೇಡ, ಪಟ್ಟೆದಾನೆಗಳಿಂದ ಗಟ್ಯಾಗಿ ಮೇಲ್ತುಳಿಸುವನವ ಮೂಢ, ಮಲ್ಲರ ಕೈಯಿಂದ ಕುಟ್ಟಿ ಕೆಡಹಿಸುವನವನು ಪ್ರಚಂಡ, ತಿಳುಹಿದೆನುದ್ದಂಡ ಇಷ್ಟು ಪರಿಯ ಬಹು ಕಷ್ಟವೇತಕೆಲೋ ದಿಟ್ಟ ಪುರಂದರವಿಟ್ಠಲ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು