ಭಾರತೀದೇವಿ ತಾಯೆ.

ಭಾರತೀದೇವಿ ತಾಯೆ.

(ರಾಗ ಕೇದಾರಗೌಳ. ಅಟ ತಾಳ) ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ|| ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣ ಚಿನ್ನುಮಯ ಸುರರಿಂ ಸೇವಿತೆ ಘನ್ನ ಮಹಿಮಳೆ ಇನ್ನೇನ ಬಣ್ಣಿಪೆ ನಿನ್ನ ಪತಿಗೆ ಬಿನ್ನವಿಸೆನ್ನನುದ್ಧರಿಸಮ್ಮ ಮುಕ್ತಾಮುಕ್ತರೊಡೆಯಳೆ ತತ್ವಾಭಿಮಾನಿ ರಕ್ತಶುಕ್ಲ ಸಂಬಂಧತನು ದೂರಳೆ ಉತ್ತಮ ಗುಣನಿಧಿ ಶ್ರೀಶನ ಭಜಿಪಳೆ ಚಿತ್ತ ಬಂದಂತೆನ್ನ ಭೃತ್ಯನೆಂದೆಣಿಸಮ್ಮ ಮತ್ತೊಂದು ಅನ್ಯಾಶ್ರಯವು ನೋಡಿದರಿಲ್ಲ ಇತ್ತ ಬಾರೆಂತೆಂದು ಕರೆವರಿಲ್ಲ ಚಿತ್ತಜನಯ್ಯ ಶ್ರೀ ಪುರಂದರವಿಠಲನ ಭೃತ್ಯರ ಭೃತ್ಯರ ಭೃತ್ಯನಂದೆಣಿಸಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು