ಏಕೇ ಈ ದೇಹವನು ದಂಡಿಸುವೆ ವ್ಯರ್ಥ

ಏಕೇ ಈ ದೇಹವನು ದಂಡಿಸುವೆ ವ್ಯರ್ಥ

( ರಾಗ ಮುಖಾರಿ. ಝಂಪೆ ತಾಳ) ಏಕೇ ಈ ದೇಹವನು ದಂಡಿಸುವೆ ವ್ಯರ್ಥ ||ಪ|| ಏಕಚಿತ್ತದಲಿ ಲಕ್ಷೀಪತಿಯೆನ್ನದೆ ||ಅ|| ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು ಬಕಪಕ್ಷಿಯಂತೆ ಹೀನ ಬುದ್ಧಿಗಳ ಯೋಚಿಸಿ ಕುಳಿತು ಫಲವೇನು ದಾನವಾಂತಕನ ಧ್ಯಾನಕೆ ಮೌನವುಂಟೆ || ಜಪವ ಮಾಡುವೆನೆನುತ ಕಪಟ ಬುದ್ದಿಯ ಗುಣಿಸಿ ಗುಪಿತದಲಿ ಕುಳಿತು ಫಲವೇನು ನಿನಗೆ ಅಪರಿಮಿತ ಮಹಿಮ ನಾರಾಯಣ ಎಂದೆನಲು ಸಫಲವಲ್ಲದೆ ಬೇರೆ ಜಪವು ಉಂಟೆ || ಹಿಂದಜಾಮಿಳಗೆ ಮುಕುತಿಯ ನಾಮಮಾತ್ರದಲಿ ಚಂದದಿಂ ಕರುಣಿಸಲಿಲ್ಲವೇನೊ ಸಂದೇಹವನು ಬಿಟ್ಟು ನೀನೊಂದು ಕ್ಷಣ ಬಿಡದೆ ತಂದೆ ಪುರಂದರವಿಠಲ ಎನು ಕಂಡ್ಯ ಮನವೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು