ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ

ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ

( ರಾಗ ಪಂತುವರಾಳಿ/ಕಾಮವರ್ಧಿನಿ. ಆದಿ ತಾಳ) ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ ||ಪ|| ಅಟ್ಟ ಅಡುಗೆ ಉಣಲುಬಿಡನು ಕೊಟ್ಟ ಸಾಲ ಕೇಳಬಿಡನು ಪೆಟ್ಟಿಗೆಯೊಳಗಿದ್ದ ಚಿನ್ನವ ತೊಟ್ಟೇನೆಂದರೆ ಯಮನು ಬಿಡನು || ಅಕ್ಕನಿಲ್ಲಿ ಕರೆಯಲಿಲ್ಲ ಮಕ್ಕಳನ್ನು ಪಡೆಯಲಿಲ್ಲ ದುಃಖಗೊಂಡು ಕಣ್ಣೀರನು ಉಕ್ಕಿಸಿದರೆ ಬಿಡನು ಯಮನು || ಪೇಳ್ವ ನೆಂಟರಿಂಗೆ ಕರೆದು ಬೇಳೆ ಬೆಲ್ಲವನ್ನು ತಂದು ನಾಳೆ ಮಗನ ಮದುವೆ ಎಂದು ತಾಳು ಎಂದರೆ ಯಮನು ಬಿಡನು || ಮಾಳಿಗೆ ಮನೆಯಿರಲಿ ಜಾಳಿಗೆ ತುಂಬ ಹೊನ್ನಿರಲಿ ಆಳು ಮಂದಿ ಶಾನೆಯಿರಲಿ ಕಾಲನು ತಾ ಬೆನ್ನ ಬಿಡನು || ಅರ್ತಿಯಿಂದ ಸಂಸಾರವ ವ್ಯರ್ಥವಾಗಿ ನೆಚ್ಚಬೇಡಿ ಕರ್ತು ಪುರಂದರ ವಿಠಲನ್ನ ಭಕ್ತಿಯಿಂದಲೆ ಭಜಿಸಿರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು