ಬಾರಯ್ಯ ವೆಂಕಟರಮಣ
( ರಾಗ ಸಾವೇರಿ. ತ್ರಿಪುಟ ತಾಳ)
ಬಾರಯ್ಯ ವೆಂಕಟರಮಣ, ಭಕ್ತರ ನಿಧಿಯೆ ||ಪ||
ತೋರೋ ನಿನ್ನಯ ದಯ, ತೋಯಜಾಂಬಕನೆ ||ಅ||
ವೇದಗೋಚರ ಬಾರೋ, ಆದಿಕಚ್ಛಪ ಬಾರೋ
ಮೋದಸೂಕರ ಬಾರೋ, ಸದಯಾ ನರಸಿಂಹ ಬಾರೋ ||
ವಾಮನ ಭಾರ್ಗವ ಬಾರೋ, ರಾಮಕೃಷ್ಣನೆ ಬಾರೋ
ಪ್ರೇಮದ ಬುದ್ಧನೆ ಬಾರೋ, ಸ್ವಾಮಿ ಕಲ್ಕಿ ನೀ ಬಾರೋ ||
ಅರವಿಂದನಾಭ ಬಾರೋ, ಸುರರ ಪ್ರಭುವೇ ಬಾರೋ
ಪುರುಹೂತವಂದ್ಯ ಬಾರೋ ಪುರಂದರ ವಿಠಲ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments