ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

( ರಾಗ ತೋಡಿ. ಅಟ ತಾಳ) ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ||ಪ|| ಜಾರತನವ ಬಿಡೋ ಜಾನಕೀರಮಣನೆ ನಾರಿಯರೆಲ್ಲರು ನವನೀತಚೋರನೆಂದು ದೂರು ಹೇಳಲಿ ಸಾರ ಓಡಿದ ಶ್ರೀ ನೀಲಗಿರಿ ವಾಸ ||ಅ|| ಅನಿರುದ್ಧ ಜನಾರ್ಧನ ಆನಂದನಿಲಯ ಹರಿ ಮುನಿಮೌನಿಸಹವಾಸ ಮುಚಕುಂದ ವರದ ಘನನೀಲಮೇಘಶ್ಯಾಮ ಕಾಮಿತಾರ್ಥ ಕಮಲನಾಭ ಸನಕಾದಿವಂದ್ಯ ಸಾಗರಶಯನ ಸಾರಸನೇತ್ರ ಶಾಶ್ವತರೂಪ || ಮುದ್ದು ಕೊಟ್ಟೇನು ಬಾರೋ ಮುನಿಸದೇತಕೊ ತಂದೆ ಬುದ್ಧಿ ಕೇಳಯ್ಯ ನಮ್ಮ ಭದ್ರಾದ್ರಿ ರಮಣ ಹದ್ದನು ಏರಿಕೊಂಡು ಅಮರರ ಕೂಡಿ ಆಡಿ ಬುದ್ಧನಾಥನೆ ಬೆಣ್ಣೆ ಕದ್ದ ಕಳ್ಳನೆ ಕಸ್ತೂರಿರಂಗನೆ || ನರಹರಿ ಮಾಧವ ವಿಷ್ಣು ನಂದನಂದನೆ ಶರಧಿಬಂಧನೆ ನಿನಗೆ ಶರಣುವ ಹೊಂದಿದೆ ಸೇರಿದೆ ಮೇಲೆ ನಿನ್ನ ಬೆರೆದು ಅಪ್ಪಯ್ಯ ರಂಗ ಶರಣು ಮಂದಾರ ಶೇಷಗಿರೀಶ ವರದ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು