ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

( ರಾಗ ಮೋಹನ ಝಂಪೆ ತಾಳ) ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೆ ಲೇಸು ಉಂಬುಡುವುದಕ್ಕಿರದ ಅರಸನೋಲಗಕ್ಕಿಂತ ತುಂಬಿದೂರೊಳಗೆ ತಿರಿದುಂಬುವುದೆ ಲೇಸು ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ ನಂಬಿ ಹರಿದಾಸರೊಳು ಪೊಂದುವುದೆ ಲೇಸು ಒಡನೆ ಹಂಗಿಸುವವನ ಪಾಲೋಗರಕ್ಕಿಂತ ಕುಡಿ ನೀರು ಕುಡಿದುಕೊಂಡಿರುವುದೆ ಲೇಸು ಕಡು ಕುಹಕನೊಡನೆ ಸಂಗವ ಮಾಡುವುದಕ್ಕಿಂತ ಅಡವಿಯೊಳಗಜ್ಞಾತವಾಸವೇ ಲೇಸು ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ ಹಸನಿಲ್ಲದಾ ಹಾಳುಗುಡಿಯೆ ಲೇಸು ಎಸೆದು ಭಜಿಸಲು ನಮ್ಮ ಪುರಂದರ ವಿಠಲನ್ನ ವಶವಹಗೆ ಮುಕ್ತಿಯು ವಶವಹುದೆ ಕೇಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು