ಅಂಬಿಗ ನಾ ನಿನ್ನನಂಬಿದೆ

ಅಂಬಿಗ ನಾ ನಿನ್ನನಂಬಿದೆ

( ರಾಗ ಶಂಕರಾಭರಣ ಅಟ ತಾಳ) ಅಂಬಿಗ ನಾ ನಿನ್ನನಂಬಿದೆ, ಜಗ- ದಂಬಾರಮಣ ನಂಬಿದೆ ||ಪ|| ತುಂಬಿದ ಹರಿಗೋಲಂಬಿಗ, ಅದ- ಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದ- ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆ ಸೆಳವು ಘನವಯ್ಯ ಅಂಬಿಗ ಸುಳಿಯೊಳು ಮುಳುಗಿದೆ ಅಂಬಿಗ, ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ ಆರು ತೆರೆಯ ನೋಡಂಬಿಗ, ಅದು ಮೀರಿ ಬರುತಲಿದೆ ಅಂಬಿಗ ಯಾರಿಂದಲಾಗದು ಅಂಬಿಗ, ಅದ ನೀ- ವಾರಿಸಿ ದಾಟಿಸೋ ಅಂಬಿಗ ಸತ್ಯವೆಂಬುವ ಹುಟ್ಟಂಬಿಗ, ಸದಾ ಭಕ್ತಿಯೆಂಬುದೆ ಪಥವಂಬಿಗ ನಿತ್ಯಮೂರುತಿ ಪುರಂದರವಿಠಲ, ನಮ್ಮ ಮುಕ್ತಿಮಂಟಪಕೊಯ್ಯೊ ಅಂಬಿಗ
ದಾಸ ಸಾಹಿತ್ಯ ಪ್ರಕಾರ
ಬರೆದವರು