ಆರಿಗೆ ಮೊರೆಯಿಡಲೊ

ಆರಿಗೆ ಮೊರೆಯಿಡಲೊ

( ರಾಗ ಶಂಕರಾಭರಣ ಆದಿ ತಾಳ) ಆರಿಗೆ ಮೊರೆಯಿಡಲೊ ಹರಿಯೆ ವಿ- ಚಾರಿಸುವರ ಒಬ್ಬರ ಕಾಣೆ ||ಪ|| ಹಲವಂಗ ಗುಣದವನೊಬ್ಬರಸು ತಲೆಯಿಲ್ಲದವನೊಬ್ಬ ಪ್ರಧಾನಿ ತಳವಾರ ಕಿಡಿಗಣ್ಣಿನವನೊಬ್ಬ ಬಲುಬೊಟ್ಟು ಗುಣದೊಬ್ಬ ಶ್ಯಾನಭೋಗ ಅರಸನ ಹೆಂಡತಿ ರತಿಗಾರಿ ಅರಸನ ಮಗಳು ಅಹಂಕಾರಿ ಅರಸನ ಸೊಸೆಯೊಬ್ಬ ಅನ್ಯಾಕಾರಿ ಅರಸನ ದಾಸಿಯು ಅತಿ ಕ್ರೂರಿ ನಡುನಡುವೆ ಯಮನ ಪಟ್ಟಣವು ಎ- ನ್ನೊಡೆಯ ಪಂಚೇಂದ್ರಿಯ ದೈವಕರು ತಡೆಯದಂತೆ ನೀ ದಯಮಾಡೋ ಎ- ನ್ನೊಡೆಯ ಪುರಂದರ ವಿಠಲನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು