ಆವಾಗ ನೆನೆ ಮನವೆ

ಆವಾಗ ನೆನೆ ಮನವೆ

( ರಾಗ ಮೋಹನಕಾಂಭೋಜ ಛಾಪು ತಾಳ) ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ ಕಾವಡಿದು ಕೃಷ್ಣ ನಾಮ ||ಪ|| ದೇವಾದಿ ದೇವನೆಯೆಂದು ಕರಿಮೊರೆಯಿಡಲು ತಾನೊಲಿದ ದಿವ್ಯ ನಾಮ ದ್ರೌಪದೀದೇವಿಯಭಿಮಾನವನೆ ರಕ್ಷಿಸಿತು ಶ್ರೀಪತಿಯ ದಿವ್ಯ ನಾಮ ಆಪತ್ತು ಪರಿಹರಿಸಿ ಅಡವಿ ಶಿಶುವನೆ ಕಾಯ್ತು ಗೋಪಾಲಕೃಷ್ಣ ನಾಮ ಗುರು ಭೀಷ್ಮ ಕರ್ಣ ಅಶ್ವತ್ಥಾಮ ಜಯದ್ರಥರ ಪರಿಭವೈಗೈದ ನಾಮ ಕುರುಸೈನ್ಯಶರಧಿಯೊಳು ಪಾಂಡವರ ದಾಟಿಸಿತು ಸಿರಿ ಕೃಷ್ಣ ದಿವ್ಯ ನಾಮ ಗೋಪವನಿತೆಯರು ಕುಟ್ಟುತ್ತ ಬೀಸುತ್ತ ತಾ ಪೊಗಳುತಿಪ್ಪ ನಾಮ ತಾಪಸನು ಸಾಂದೀಪ ಮುಚಕುಂದಸೇನರನು ಕಾಪಾಡಿದ್ಹರಿಯ ನಾಮ ಸುಖವಾದ ಕಾಲದಲಿ ಈ ನಾಮಗಾಯನವು ಅಕಳಂಕ ಕೃಷ್ಣ ನಾಮ ನಿಖಿಳ ದುಃಖದ ಕಾಲದಲೀ ಗಾಯನವು ದಿವ್ಯ ಸುಕೃತವಹ ಕೃಷ್ಣ ನಾಮ ಸಕಲ ಭಕುತರಿಗೀವ ಸದ್ಗತಿಯ ಕರೆದು ಶ್ರೀ ಲಕುಮೀಪತಿ ದಿವ್ಯ ನಾಮ ಸುಖವನಧಿ ಅರವಿಂದನಾಭ ಪುರಂದರ ವಿಠಲ ಬಕವೈರಿಗೊಲಿದ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು