ಆವ ಕುಲ ತಿಳಿಯಲಾಗದು
( ರಾಗ ಪೂರ್ವಿ ಅಟ ತಾಳ)
ಆವ ಕುಲ ತಿಳಿಯಲಾಗದು ||ಪ||
ಕಡಲ ಮಗಳ ಕಂಡನಂತೆ
ಅಡವಿಯೊಳಗೆ ಮಡದಿಯಂತೆ
ಪೊಡವಿಗೆ ತಾನೊಡೆಯನಂತೆ
ಕೊಡೆಯ ಪಿಡಿದು ಬೇಡಿದನಂತೆ
ರಕ್ಕಸರಲ್ಲಿ ಕಾಳಗವಂತೆ
ಮರ್ಕಟರೆಲ್ಲ ಬಂಟರಂತೆ
ಪಕ್ಷಿಯನೇರಿ ಮೆರೆದನಂತೆ
ಮುಕ್ಕಣ್ಣೇಶ್ವರ ಮೊಮ್ಮಗನಂತೆ
ವಿದ್ಯೆಯಲ್ಲಿ ಪ್ರೌಢನಂತೆ
ಯುದ್ಧದಲ್ಲಿ ಶೂರನಂತೆ
ಮುದ್ದು ಪುರಂದರ ವಿಠಲನಂತೆ
ಬೇಲೂರ ಚೆನ್ನಿಗನಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments