ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ|| ಕದಬಾಗಿಲಿರಿಸಿದ ಕಳ್ಳ ಮನೆಇದು ಮುದದಿಂದಲೋಡ್ಯಾಡೋ ಸುಳ್ಳು ಮನೆ | ಇದಿರಾಗಿ ವೈಕುಂಠವಾಸಮಾಡುವಂತ ಪದುಮನಾಭನ ದಿವ್ಯ ಬದುಕುಮನೆ ||೧|| ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ ಕೇಳಯ್ಯ ಹರಿಕಥೆಶ್ರವಣಂಗಳ | ನಾಳೆ ಯಮದೂತರು ಬಂದೆಳೆದೊಯ್ವಾಗ ಮಾಳಿಗೆ ಮನೆ ಸಂಗಡ ಬಾರದಯ್ಯ ||೨|| ಮಡದಿಮಕ್ಕಳು ಎಂಬ ಹಂಬಲ ನಿನಗೇಕೋ ಕಡುಗೊಬ್ಬುತನದಿ ನಡೆಯದಿರು | ಒಡೆಯ ಶ್ರೀ ಪುರಂದರ ವಿಠಲನ ಚರಣವ ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು