ಅರಿಯದೆ ಬಂದೆವು ಕಿಂಸನ್

ಅರಿಯದೆ ಬಂದೆವು ಕಿಂಸನ್

( ರಾಗ ಸಾರಂಗ ತ್ರಿಪುಟ ತಾಳ) ಅರಿಯದೆ ಬಂದೆವು ಕಿಂಸನ್ ಪರಿಹರಿಸಯ್ಯ ಭಂಸನ್ ||ಪ|| ಪರಿಪರಿಯಿಂದಲೆ ಹರಿ ಹರಿಯೆಂದರೆ ದುರಿತದ ಭಯ ಒಂದಿಲ್ಲಲ್ಲಾ ||ಅ|| ಮತ್ಸ್ಯಾವತಾರಗೆ ಕಿಂಸನ್ ಕೂರ್ಮಾವತಾರಗೆ ಭಂಸನ್ ಸ್ವಚ್ಛಾನಂತನ ಸ್ಮರಣೆಯ ಮಾಡಿದರೆ ಮೋಕ್ಷಪದವೇಕಲ್ಲಲ್ಲಾ || ಕನಕಾಕ್ಷ ಕೊಂದವಗೆ ಕಿಂಸನ್ ಪ್ರಹ್ಲಾದಗೆ ಒಲಿದಗೆ ಭಂಸನ್ ನಾರಾಯಣ ನಿಮ್ಮ ನಾಮವ ನೆನೆದರೆ ನರಕದ ಭಯವೊಂದಿಲ್ಲಲ್ಲಾ || ಧರೆಯನಳೆದಗೆ ಕಿಂಸನ್ ಕೊಡಲಿಯ ಪಿಡಿದಗೆ ಭಂಸನ್ ಪರಿಪರಿಯಿಂದಲೆ ಹರಿಹರಿಯೆಂದರೆ ದುರಿತದ ಭಯವೊಂದಿಲ್ಲಲ್ಲಾ || ರಾವಣನಳಿದಗೆ ಕಿಂಸನ್ ಗೋವಳಕೃಷ್ಣಗೆ ಭಂಸನ್ ಭಾವೆ ದ್ರೌಪದಿ ಸಭೆಯಲ್ಯಾಗಭಿ ಮಾನವ ಕಾಯ್ದನಲ್ಲಲ್ಲಾ || ಬತ್ತಲೆ ನಿಂತಗೆ ಕಿಂಸನ್ ಮತ್ತಶ್ವವನೇರ್ದಗೆ ಭಂಸನ್ ಸತ್ಯದಿ ಪುರಂದರ ವಿಠಲನ ನೆನೆದರೆ ಸತ್ಯಲೋಕವಾಯ್ತಲ್ಲಲ್ಲಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು