ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು
( ರಾಗ ಧನಶ್ರೀ ಚಾಪು ತಾಳ)
ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು ಅಣಗಿಸುವರು ನೋಡೆ ||ಪ||
ಯಾರು ಪಡೆದನೆಂಬೋರೆ, ಅಮ್ಮಯ್ಯ
ದಾರು ಪಡೆದರೆಂಬೊರೆ
ಕೇರಿಯ ಬೆಣ್ಣೆಯ ಕದ್ದು ತಿಂದವನೆಂದು
ನಾರಿಯರು ದೂರುತಾರೆ ಕೇಳಮ್ಮ ||
ಮಾತೆ ನೀನಲ್ಲವಂತೆ, ಅಮ್ಮಯ್ಯ
ಪಿತನು ಇಲ್ಲಿಲ್ಲವಂತೆ
ಮಾತುಳನ ಬಾಧೆಗೆ ಮಧುರೆಯಿಂದಲಿ ತಂದು
ಖಾತಿಗೆ ಮಾರಿದರಂತೆ ನಿಮಗೆ ||
ದೇವಕಿ ತಾಯಿಯಂತೆ, ಅಮ್ಮಯ್ಯ ವಸು-
ದೇವನು ತಂದೆಯಂತೆ
ಕಾವಜನಕ ನಮ್ಮ ಪುರಂದರ ವಿಠಲನ
ಆವ ಕಾವನೆಂಬೊರೆ ಯಶೋದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments