ಗೋವಿಂದಾ ನಿನ್ನ ನಾಮವೆ ಚಂದ

ಗೋವಿಂದಾ ನಿನ್ನ ನಾಮವೆ ಚಂದ

ಪಲ್ಲವಿ ಗೋವಿಂದಾ ನಿನ್ನ ನಾಮವೆ ಚಂದ || ಅನುಪಲ್ಲವಿ ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ|| ಚರಣ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ||೧|| ಪರಮ ಪುರುಷ ಶ್ರೀ ಪುರಂದರ ವಿಟ್ಠಲನ ಹಿಂಗದ ದಾಸರ ಸಲಹುವುದೆ ಆನಂದ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು