ಆಡಹೋಗಲು ಬೇಡವೊ, ರಂಗಯ್ಯ

ಆಡಹೋಗಲು ಬೇಡವೊ, ರಂಗಯ್ಯ

( ರಾಗ ಪಂತುವರಾಳಿ ಆದಿ ತಾಳ) ಆಡಹೋಗಲು ಬೇಡವೊ, ರಂಗಯ್ಯ ಬೇಡಿಕೊಂಬೆನೊ ನಿನ್ನ ||ಪ|| ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ ಕಾಡುವರೊ ನಿನ್ನನು ಮುಕುಂದ ||ಅ|| ನೀರೊಳು ಮುಳುಗೆಂಬರೊ, ಬೆನ್ನಿನ ಮೇಲೆ ಭಾರವ ಹೊರಿಸುವರೋ ಕೋರೆದಾಡೆಯ ಮುದ್ದಾಡಿ ಸೋಲಿಸುವರೋ ಕರುಳಹಾರ ಕೊರಳನೆಂಬರೋ || ಪುಟ್ಟರೂಪನೆಂಬರೋ, ಅಕ್ಕಯ್ಯ ಕೊಡಲಿ ಪಿಡಿದನೆಂಬರೋ ಕಡೆಗಣ್ಣ ರುದ್ರನ ವರವುಳ್ಳ ದಶ- ಕಂಠನ ಕೊಂದವನೆಂಬರೋ || ಬೆಣ್ಣೆ ಕಳ್ಳನೆಂಬರೋ, ಹೆಂಗಳನೆಲ್ಲ ಭಂಗ ಮಾಡಿದನೆಂಬರೋ ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ ಪುರಂದರ ವಿಠಲ ಬಾ ಎಂಬರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು