ಕೊಳಲನೂದುತ್ತಾ ಬಂದ

ಕೊಳಲನೂದುತ್ತಾ ಬಂದ

(ರಾಗ ಕಾಂಭೋಜ ಆದಿತಾಳ) ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚಂದ ||ಪ|| ಆ ವಸುದೇವನ ಕಂದ , ಇವ ನೋಡೆ ದೇವಕಿ ಬಸಿರೊಳು ಬಂದ ಮಾವ ಕಂಸನ ಕೊಂದ ಭಾವಜನಯ್ಯ ಮುಕುಂದ || ಮುತ್ತಿನಾಭರಣವ ತೊಟ್ಟು ಹಸ್ತದಿ ಕೊಳಲ ಕೊಟ್ಟು ಕಸ್ತೂರಿ ತಿಲಕನಿಟ್ಟಾ ತುತ್ತುರುತುರುರೆಂಬ ನಾದವ ಪಿಡಿಯೆ || ಹಿಂದೆ ಗೋವುಗಳ ಹಿಂಡು ಮುಂದೆ ಗೋಪಾಲ ದಂಡು ಹಿಂದಕ್ಕೆ ದೈತ್ಯರ ಕೊಂದ ಪು- ರಂದರವಿಠಲ ಚೆಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು