ಏಕಾರತಿಯ ನೋಡುವ ಬನ್ನಿ

ಏಕಾರತಿಯ ನೋಡುವ ಬನ್ನಿ

(ರಾಗ ಪೂರ್ವಿ ಝಂಪೆ ತಾಳ) ಏಕಾರತಿಯ ನೋಡುವ ಬನ್ನಿ ||ಪ| ನಮ್ಮ ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ|| ಹರುಷದಿಂದ ಏಕಾರತಿಯ ಬೆಳಗಲು ನರಕದಿಂದುದ್ಧಾರ ಮಾಡುವನು ಪರಮ ಭಕುತಿಯಿಂದ ನರರನು ಹರಿ ತನ್ನ ಉದರದೊಳಿರಿಸುವನು ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು ಒಪ್ಪುವ ದೀಪಕೆ ದೀಪ ಹಚ್ಚಿ ತಪ್ಪದೆ ಸಕಲ ಪಾಪಗಳ ಸಂಹರಿಸುವ ಅಪ್ಪ ವಿಟ್ಟಲನ ಪಾದಕ್ಕೆ ಬೆಳಗುವ ಅನ್ಯ ಚಿಂತೆಯ ಮಾಡದನ್ಯರ ಭಜಿಸದೆ ಅನ್ಯ ದೇವರ ಸ್ಮರಿಸದಲೆ ಅನನ್ಯನಾಗಿ ಶ್ರೀ ಪುರಂದರ ವಿಟ್ಟಲನ್ನ ಘನ್ನ ನಾಮಂಗಳ ಧ್ಯಾನಿಸುತ್ತಲಿನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು