ದೂರು ಮಾಡುವರೇನೆ

ದೂರು ಮಾಡುವರೇನೆ

(ರಾಗ ಕಾಂಭೋಜ. ಝಂಪೆ ತಾಳ) ದೂರು ಮಾಡುವರೇನೆ , ರಂಗಯ್ಯನ ದೂರು ಮಾಡುವರೇನೆ ||ಪ|| ದೂರು ಮಾಡುವರೇನೆ ಚಾರು ಮಂದಿಯೊಳಗೆ ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ||ಅ.ಪ|| ನಂದಗೋಕುಲದಲ್ಲಿ ಮಂದೆ ಗೋವುಗಳ ಮುಂದೆ ಕೊಳಲನೂದಿ ಚಂದದಿ ಬರುವನ || ಕಳ್ಳತನದಲ್ಲಿ ಗೊಲ್ಲರ ಮನೆ ಪೊಕ್ಕು ಗುಲ್ಲು ಮಾಡದವರ ಗಲ್ಲ ಕಚ್ಚಿದನೆಂದು || ಕಾಮದಿಂದಲಿ ನಿನ್ನ ಕಳವಳತನಕಾಗಿ ಶ್ಯಾಮ ಸುಂದರ ಶ್ರೀ ಪುರಂದರ ವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು