ಧೂಪಾರತಿಯ ನೋಡುವ ಬನ್ನಿ

ಧೂಪಾರತಿಯ ನೋಡುವ ಬನ್ನಿ

(ರಾಗ ಪೂರ್ವಿಕಲ್ಯಾಣಿ. ಅಟ ತಾಳ) ಧೂಪಾರತಿಯ ನೋಡುವ ಬನ್ನಿ ||ಪ|| ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ ||ಅ.ಪ|| ಮುತ್ತು ಛತ್ರ ಚಾಮರ ಪತಾಕ ಧ್ವಜ ರತ್ನ ಕೆತ್ತಿಸಿದ ಪದಕ ಹಾರಗಳು ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ ಸತ್ಯಭಾಮೆ ರುಕ್ಮಿಣಿಯರಸ ಶ್ರೀ ಕೃಷ್ಣನ ಢಣ ಢಣ ಢಣವೆಂಬ ತಾಳ ದಂಡಿಗೆ ಭೇರಿ ಝಣಕು ಧಿಮಿಕು ಎಂಬ ಮದ್ದಳೆಯ ಝಣ ಝಣಿಸುವ ರವ ವೀಣೆ ಕಿನ್ನರಿ ಸ್ವರ ಘನ ರಾಗದಿಂದಲಿ ಹಾಡುತ ಪಾಡುತಲಿ ಷಡಪಂಚ ಘಂಟೆ ಝಾಗಟೆಯು ಮೊದಲಾದ ದೃಢವಾದ ವಾದ್ಯ ಮಂಗಳದಿನದಲ್ಲಿ ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ ಹರಿ ಸುರಪತಿ ವಿರಿಂಚಿಜನಕ ಪರಮ ಮೂರುತಿ ಪುರುಷೋತ್ತಮನ ಪರದೈವವೆಂಬ ಶ್ರೀ ರಂಗನಾಥನಾದ ಪುರಂದರ ವಿಠಲ ದೇವರ ಪೂಜೆಯ
ದಾಸ ಸಾಹಿತ್ಯ ಪ್ರಕಾರ
ಬರೆದವರು