ಇದು ಏನಂಗ ಮೋಹನಾಂಗ

ಇದು ಏನಂಗ ಮೋಹನಾಂಗ

(ರಾಗ ದರ್ಬಾರ್ ಅಟತಾಳ) ಇದು ಏನಂಗ ಮೋಹನಾಂಗ ||ಪ|| ಮದನಜನಕ ತೊರವೆಯ ನರಸಿಂಗ ||ಅ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ || ವರನೀಲ ಮುತ್ತುಮಾಣಿಕ ಹಾರಗಳಿರೆ ಕೊರಳಲಿ ಕರುಳಮಾಲೆಯ ಹಾಕಿ ಮೆರೆವುದು || ತೊರವೆಯ ನರಹರಿ ಪುರಂದರವಿಠಲ ಸಿರಿಯಿಪ್ಪ ತೊಡೆಯೊಳು ಅರಿಯನಿಟ್ಟಿರುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು