ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ

ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ

(ರಾಗ ಭೈರವಿ ಆದಿತಾಳ) ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ ಹೊಂತಕಾರಿ ಕಾಣಿರೋ ||ಪ|| ಸಂತತ ಸುರರಿಗೆ ಅಮೃತವನುಣಿಸಿದ ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅ|| ಮಂದರಗಿರಿ ತಂದು ಸಿಂಧುವಿನೊಳಗಿಟ್ಟು ಚಂದದಿ ಕಡೆದು ಅಮೃತವ ತೆಗೆದು ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ ದಂಧನಗಳ ಮಾಡಿ ದೈತ್ಯರ ವಂಚಿಸಿದ || ವಿಶ್ವಾಸದಿಂದಲಿ ಅಸುರಗೆ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ ನಸುನಗುತಲಿ ಬಂದು ಭಸ್ಮಾಸುರನಿಗೆ ಭೋಗ- ದಾಸೆಯ ತೋರಿ ಭಸ್ಮವ ಮಾಡಿದ || ವಸುಧೆಯೊಳು ಹೆಣ್ಣು ಒಸಗೆಯಾಗದ ಮುನ್ನ ಬಸಿರೊಳು ಬ್ರಹ್ಮನ ಪಡೆದವಳಿವಳು ಕುಸುಮನಾಭ ಶ್ರೀಪುರಂದರವಿಠಲನ ಪೆಸರು ಪೊತ್ತಿಹಳು ಈ ಪೊಸಕನ್ನಿಕೆಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು