ಗೋವಿಂದ ಎನ್ನಿರೋ
(ರಾಗ: ಪಂತುವರಾಳಿ. ಝಂಪೆ ತಾಳ)
ಗೋವಿಂದ ಎನ್ನಿರೋ, ಹರಿ-
ಗೋವಿಂದ ನಾಮವ ಮರೆಯದಿರೋ ||ಪ||
ತುಂಬಿರುವ ಪಟ್ಟಣಕೊಂಭತ್ತು ಬಾಗಿಲು
ಸಂಭ್ರಮದರಸುಗಳೈದು ಮಂದಿ
ಡಂಭಕತನದಿಂದ ಕಾಯುವ ಜೀವನ
ನಂಬಿ ನೆಚ್ಚಿ ಕೆಡಬೇಡಿ ಕಾಣಿರೋ ||
ನೆಲೆಯು ಇಲ್ಲದ ಕಾಯವೆಲುಬಿನ ಪಂಜರವು
ಒಲಿದು ಸುತ್ತಿದ ಚರ್ಮದ ಹೊದಿಕೆ
ಮಲ ಮೂತ್ರಂಗಳಿರವು ಕೀವು ಕ್ರಿಮಿಗಳು
ಬರಿಯ ತೊಗಲ ಮೆಚ್ಚಿ ಕೆಡಬೇಡಿರೋ ||
ಹರ ಬ್ರಹ್ಮ ಸುರರಿಗೆ ವಂದಿತನಾಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೋ
ಪುರಂದರ ವಿಠಲನ ಚರಣವ ಭಜಿಸಿರೋ
ದುರಿತಭಯಗಳೆಲ್ಲವು ಪರಿಹರವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments