ತುರು ಕರು ಕರೆದರೆ ಉಣಬಹುದಣ್ಣ

ತುರು ಕರು ಕರೆದರೆ ಉಣಬಹುದಣ್ಣ

(ರಾಗ ಕಾಂಭೋಜ ಝಂಪೆ ತಾಳ) ತುರು ಕರು ಕರೆದರೆ ಉಣಬಹುದಣ್ಣ ತುರು ಕರು ಕರೆದರೆ ಅತಿ ಪುಣ್ಯವಯ್ಯ || ತುರು ಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು ತುರು ಕರಿಂದ ಎಂಜಲು ಹೋಗೋದು ತುರು ಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ || ತುರು ಕರಿಂದ ಸ್ವರ್ಗ ಸಾಧನವಾಗೋದು ತುರು ಕರಿಂದ ನರಕ ದೂರವಯ್ಯ ತುರು ಕರ ಬಂದರೆ ಸರಕ್ಕನೆ ಏಳಬೇಕು ತುರು ಕರು ಪೂಜಿಸೆ ಹರಿ ಒಲಿವ || ತುರು ಕರ ನೀರ ಎರಕೊಂಡ ನಮ್ಮ ದೇವ ಎರಕೊಂಡ ನೀರೆಲ್ಲ ಸನಕಾದಿಗಳಿಗೆ ಬೆರಕೆ ಮಾಡಿದ ಹರಿದಾಸರಿಗೆಲ್ಲ ಎರವು ಮಾಡಿದ ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು