ಡಂಗುರವ ಸಾರಿ ಡಿಂಗರಿಗರೆಲ್ಲರು

ಡಂಗುರವ ಸಾರಿ ಡಿಂಗರಿಗರೆಲ್ಲರು

( ರಾಗ ನಾದನಾಮಕ್ರಿಯೆ ಆದಿತಾಳ) ಡಂಗುರವ ಸಾರಿ (ಹರಿಯ) ಡಿಂಗರಿಗರೆಲ್ಲರು, ಭೂ- ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು || ಒಡಲ ಝಾಗಟೆಯ ಮಾಡಿ ನುಡಿವ ನಾಲಗೆಯ ಪಿಡಿದು ಬಿಡದೆ ಢಣಢಣರೆಂದು ಬಡಿದು ಚಪ್ಪಳಿಕ್ಕುತ್ತ || ಹರಿಯು ಮುಡಿದ ಹೂವ ಹರಿ- ವಾಣದಲ್ಲಿ ಹೊತ್ತುಕೊಂಡು ಹರುಷದಿಂದ ಹಾಡಿಪಾಡಿ ಕುಣಿದು ಚಪ್ಪಳಿಕ್ಕುತ್ತ || ಇಂದು ಸಕಲಲೋಕಕೆ ಲಕ್ಷ್ಮೀ- ಕಾಂತನಲ್ಲದಿಲ್ಲವೆಂದು ಸಂತತಂ ಭಜಿಸುತ ನಿ- ಶ್ಚಿಂತ ಪುರಂದರವಿಠಲನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು