ಮನವ ಶೋಧಿಸಬೇಕೋ ನಿಚ್ಚ

ಮನವ ಶೋಧಿಸಬೇಕೋ ನಿಚ್ಚ

(ರಾಗ ನಾದನಾಮಕ್ರಿಯೆ ಛಾಪುತಾಳ) ಮನವ ಶೋಧಿಸಬೇಕೋ ನಿಚ್ಚ , ದಿನ ದಿನಮಾಡುವ ಪಾಪ ಪುಣ್ಯದ ವೆಚ್ಚ || ಧರ್ಮ ಅಧರ್ಮ ವಿಂಗಡಿಸಿ ಅ- ಧರ್ಮದ ನರಗಳ ಬೇರು ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರ- ಬೊಮ್ಮಮೂರುತಿ ಪಾದಕಮಲವ ಭಜಿಸಿ || ಆತನವರಿಗೆ ಕೇಡಿಲ್ಲ . ಅವ - ಪಾತಕ ಪತಿತ ಸಂಗವ ಮಾಡ್ವನಲ್ಲ ನೀತಿವಂತರು ಕೇಳಿರೆಲ್ಲ , ನಮ- ಗಾತನೆ ಗತಿ ಈವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು