ಬೈಲಾ ಬಾವಿಗೆ ಬಂದಳೋರ್ವ ಬಾಲೆ

ಬೈಲಾ ಬಾವಿಗೆ ಬಂದಳೋರ್ವ ಬಾಲೆ

(ರಾಗ ಮೋಹನ ಛಾಪುತಾಳ) ಬೈಲಾ ಬಾವಿಗೆ ಬಂದಳೋರ್ವ ಬಾಲೆ ||ಪ|| ಕಾಲು ಜಾರಿತು ಕೊಡ ಒಡೆಯಿತು ನೀರುರುಳಿತು || ಅ.ಪ|| ನೆರಳಿಲ್ಲದೆ ನೀರಿಲ್ಲದೆ ಬೇರಿಲ್ಲದೆ ಸಸಿ ಹುಟ್ಟಿ ಹೂವಿಲ್ಲದೆ ಕಾಯಿಲ್ಲದೆ ಫಲ ಬಂದಿತು ಕರವಿಲ್ಲದೆ ಕಾಲಿಲ್ಲದೆ ಕೊಯ್ಯುವರು ಮೂವರು ಫಲ ಉಂಬರು ಎಂಭತ್ತನಾಲ್ಕು ಲಕ್ಷದಲಿ || ಕುರುಡ ಕಂಡನು ಹೂವು ನಡೆದಿರುಳೆ ಬಾಹುದನು ಮೂಕ ಕಂಡನು ಕನಸು ಕಿವುಡ ಕೇಳಿ ಸ್ಥಿರವೆಂದು ಇರವು ದಿಟ್ಟ ಗಗನಕೆ ಹಾರಿ ಮರವು ಮುರಿಯಿತು ನೋಡೆ, ಸರಿಯಾಗಿದ್ದಂಥ || ಹೆಚ್ಚಿದ ಕೊಡದವಳು ಕಂಚಿ ತೋರಣ ಕಟ್ಟಿ ರಚ್ಚಿಗೆ ಬರಲು ನಾಲ್ವರ ಮುಂದಕೆ ಉಚ್ಚರಿಸಲೊಶವಲ್ಲ ಕೇಳು ಸಜ್ಜನ ಸೊಲ್ಲ ನಿಚ್ಚಭಾವಗಳ ಪುರಂದರವಿಠಲ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು