ಎಲ್ಲಿ ಹರಿಕಥಾ ಪ್ರಸಂಗವೋ

ಎಲ್ಲಿ ಹರಿಕಥಾ ಪ್ರಸಂಗವೋ

(ರಾಗ ನಾಟ) ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು| ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನು ಜಯಜಯಾ ಹರಿಯೆಂಬುವುದೆ ಸುದಿನವು ಜಯ ಹರಿಯೆಂಬುವುದೆ ತಾರಾಬಲವು ಜಯ ಹರಿಯೆಂಬುವುದೆ ಚಂದ್ರಬಲವು ಜಯ ಹರಿಯೆಂಬುವುದೆ ವಿದ್ಯಾಬಲವು ಜಯ ಹರಿಯೆಂಬುವುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್ಯ ಸುಜನರಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು