ಹನುಮನ ಮತವೆ ಹರಿಯ ಮತವೋ
(ರಾಗ ಝಂಝೂಟ ಆದಿತಾಳ)
ಹನುಮನ ಮತವೆ ಹರಿಯ ಮತವೋ
ಹರಿಯ ಮತವೇ ಹನುಮನ ಮತವೋ ||ಪ||
ಹನುಮನು ಒಲಿದರೆ ಹರಿ ತಾನೊಲಿವನು
ಹನುಮನು ಮುನಿದರೆ ಹರಿಯು ಮುನಿವ ||ಅ.ಪ||
ಹನುಮನು ಒಲಿಯಲು ಸುಗ್ರೀವನು ಗೆದ್ದ
ಹನುಮನು ಮುನಿದಕೆ ವಾಲಿಯು ಬಿದ್ದ ||
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿದಕೆ ರಾವಣ ಬಿದ್ದ ||
ಹನುಮನು ಪುರಂದರವಿಠಲನ ದಾಸ
ಪುರಂದರವಿಠಲನು ಹನುಮನೊಳ್ವಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments