ಹಂಸ ನಿನ್ನಲ್ಲಿ ನೀ ನೋಡೋ

ಹಂಸ ನಿನ್ನಲ್ಲಿ ನೀ ನೋಡೋ

( ರಾಗ ಮೋಹನ ಅಟತಾಳ) ಹಂಸ ನಿನ್ನಲ್ಲಿ ನೀ ನೋಡೋ , ಭವ ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ|| ಸಖಗಳೆರಡುಂಟು ನಿನಗೆ , ನೀ ಹೊಕ್ಕು ಹೋಗುವೆ ಮೂರುಪಂಜರದೊಳಗೆ ಲೆಕ್ಕವಿಲ್ಲದ ಬಿಟ್ಟಿ ನಿನಗೆ , ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ || ಹಬ್ಬದ ಸವಿಗೆ ನೀ ಬಂದೆ , ಬಲು ಕೊಬ್ಬಿಲಿ ಕಾಣದೆ ವಿಷಯದೊಳು ಬಿದ್ದೆ ನಿಬ್ಬಣದಲಿ ಮೈಯ ಮುರಿದೆ , ನೀ- ನೊಬ್ಬನೇ ಹೋಗಿ ಕಾಲಕ್ಕೆ ಗುರಿಯಾದೆ || ದಾರಿಗೆ ದಾರು ಮತ್ತಿಲ್ಲ , ದೃಢ ಸೇರಿತು ಮನವನು ಮನೆಯೊಳಗೆಲ್ಲ ದೂರ ಹೋಯಿತು ಪ್ರಾಯವೆಲ್ಲ , ಸಿರಿ- ಪುರಂದರವಿಠಲನಲ್ಲದೆ ಬೇರೆ ಇಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು