ಆರೇನು ಮಾಡುವರು ತಾ ಪಾಪಿಯಾದರೆ

ಆರೇನು ಮಾಡುವರು ತಾ ಪಾಪಿಯಾದರೆ

( ರಾಗ ಬೇಹಾಗ್ ಆದಿತಾಳ) ಆರೇನು ಮಾಡುವರು ತಾ ಪಾಪಿಯಾದರೆ ||ಪ|| ಊರೆಲ್ಲ ನೆಂಟರು ಉಣಬಡಿಸುವರ ಕಾಣೆ ||ಅ.ಪ|| ಬಾಯಾರಿ ಹೋದರೆ ಬಾವಿಯ ಜಲಬತ್ತಿತು ತಾಯಿ ಸೋದರರೆಂದು ಹಾರೈಸಿ ಹೋದರೆ ಆಯಾಸದಿಂದಲಿ ಕಣ್ಣಿಗೆ ತೋರದೆ ಮಾಯದಿಂದಲಿ ದೂರ ನಡೆಯುವರು ಜಗದಿ || ಹಸಿದು ನೆಂಟರ ಮನೆಗೆ ಉಣಲಿಕ್ಕೆ ಪೋದರೆ ಹಸಿವರಿತು ಬಡಿಸುವರ ಕಾಣೆ ರಸದಾಳಿ ಕಬ್ಬು ಮೆಲಲೆಂದು ಪೋದರೆ ವಿಷವಾಗಿ ತೋರುತಿದೆ ಪ್ರಾರಬ್ಧ ಬಲದಿಂದ || ಗಿಡದ ನೆರಳು ಎಂದು ಅಡಿಗೆ ಹೋದರೆ ಮರವು ಫಡಫಡನೆ ಉರುಳಿ ಕೆಂಡಗಳುಗುಳ್ವುದು ಮಡದಿ ಮಕ್ಕಳು ಎನ್ನ ರಕ್ಷಿಪರು ಎಂದರೆ ಹಿಡಿದು ಬಂಧಿಪರು ತಮ್ಮೊಡಲ ಗತಿಯೇನೆಂದು || ಕಷ್ಟಪಡಲಾರೆ ಕಾನನದೊಳಿರಲಾರೆ ನಿಷ್ಠುರವು ಬಂದ ಕಡೆ ನಿಲಲಾರೆನೊ ಕಷ್ಟಪಡು ಮಗನೆಂದು ಎನ್ನ ಜನನಿಯು ಹೆತ್ತು ನಿಷ್ಠುರದಿಂದಲಿ ಎರೆದಳೋ ಏನೋ || ಮನಕೆ ಬಾರದ ಹೆಣ್ಣು ಮನೆಗೆ ಹಬ್ಬಿದ ಬಳ್ಳಿ ಗುಣವಿಲ್ಲದ ಮನುಜನ ಸಂಗ ಸಮವೋ ಹಣೆಯ ಬರಹದ ವಶದಿ ದಣಿಯುತ್ತಿದ್ದರು ಮುಂದೆ ಬಿನುಗು ಭವ ಬಿಡಿಸೆ ಪುರಂದರವಿಠಲನೆನ್ನಿರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು