ಹರಿಯ ದಾಸರಿಗಿನ್ನು ಸರಿಯುಂಟೆ

ಹರಿಯ ದಾಸರಿಗಿನ್ನು ಸರಿಯುಂಟೆ

(ರಾಗ ಕಾಮವರ್ಧನಿ/ಪಂತುವರಾಳಿ. ಆದಿ ತಾಳ ) ಹರಿಯ ದಾಸರಗಿನ್ನು ಸರಿಯುಂಟೆ ನರಹರಿಯ ನಂಬಿದವರಿಗೆ ಕೇಡುಂಟೆ ಮಾರಿಯಾ ಕೈಯಲ್ಲಿ ನೀರು ಹೊರಿಸುವರು ಮಸಣಿಯಾ ಕೈಲಿ ಕಸ ಬಳಿಸುವರು ಘೋರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು ಜವನ ಕೈಲಿ ಜಂಗುಳಿ ಕಾಯಿಸುವರು ಬೊಮ್ಮ ಬೀರ ಬೇತಾಳ ಜಟ್ಟಿಂಗಳೆಲ್ಲ ಕರ್ಮದ ಕಡಲೊಳು ಮುಳುಗಿರಲು ಒಮೆಗಾ ಹರಿದಾಸರ ಪಾದವು ಸೋಕಲು ಕರ್ಮದ ಕಡಲಿಂದ ಕಡೆಹಾಯುವರು ಜಕಣಿಯು ಜಲದೇವರು ಮೊದಲಾದ ಭಿಕಾರಿ ದೈವಗಳ ಪೂಜಿಸರವರು ಲೋಕ ನಾಯಕ ಶ್ರೀ ಪುರಂದರ ವಿಠಲನ್ನ ಸಾಕಾರ ದಯದ ಪರಮ ಭಾಗವತರು
ದಾಸ ಸಾಹಿತ್ಯ ಪ್ರಕಾರ
ಬರೆದವರು