ಒಂದೇ ನಾಮದಲಡಗಿದವೋ

ಒಂದೇ ನಾಮದಲಡಗಿದವೋ

(ರಾಗ ಆನಂದಭೈರವಿ ಆದಿ ತಾಳ) ಒಂದೇ ನಾಮದಲಡಗಿದವೋ, ಅಡಗಿದವೋ ||ಪ|| ಆನಂದದಿಂದುದಿಸಿರುವ ಅಖಿಳ ವೇದಗಳು ||ಅ.ಪ|| ಒಂದೇ ನಾಮವು ಪ್ರಹ್ಲಾದನ್ನ ಕಾಯಿತು, ಮ- ತ್ತೊಂದು ನಾಮವು ಅಜಾಮಿಳನ ಸಲಹಿತು ತಂದೆ ತಾಯಿಯು ಬಿಟ್ಟ ಕಂದ ಧ್ರುವರಾಯಗಾ- ನಂದದ ಪದವನಿತ್ತಾನಂತ ಗುಣವೆಲ್ಲ || ಮತ್ಸ್ಯಾದ್ಯನಂತಾವತಾರ ಅವತಾರ ಸ್ವಚ್ಛಾದಷ್ಟಾದಶ ಪುರಾಣ ಸಾರ ಕಚ್ಛಪನಾಗಿ ಮೂಜಗಕೆ ಆಧಾರ ಸ್ವೇಚ್ಛೆಯಿಂದಲಿ ಹರಿ ಮಾಡೋ ವ್ಯಾಪಾರ|| ಒಬ್ಬರೀತಕೆ ಸಮರಿಲ್ಲ ಮಿಗಿಲಿಲ್ಲ ಅಬ್ಬರದಲಿ ಸಲಹುವ ಜಗವೆಲ್ಲ ಕಬ್ಬುಬಿಲ್ಲನ ಪಿತ ಪುರಂದರ ವಿಠಲ ವೈ ದರ್ಭೀಯ ರಮಣನ ವರ ಸುಗುಣಗಳೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು