ಎಂಥವನೆಂಥವನೇ!

ಎಂಥವನೆಂಥವನೇ!

ಪಲ್ಲವಿ: ಎಂಥವನೆಂಥವನೆ ರಂಗಯ್ಯ ಎಂಥವನೆಂಥವನೆ ಚರಣಗಳು: ಆಗಮವನು ತಂದವನೆ ರಂಗ ಬೇಗದಿ ಗಿರಿಯ ಪೊತ್ತವನೆ ಮೂಗಿಂದ ಭೂಮಿಯನೆತ್ತಿದನೆ ಶಿಶು ಕೂಗಲು ಕಂಭದಿಂದೊದಗಿದನೆ ಕೃಷ್ಣ ಧರಣಿಯ ಈರಡಿ ಮಾಡಿದನೆ ಭೂ- ಸುರನಾಗಿ ಪರಶುವ ಧರಿಸಿದನೆ ಭರದಿ ಕೋಡಗ ಹಿಂಡ ಕೂಡಿದನೆ ಫಣಿ- ಶಿರದಲಿ ಕುಣಿಕುಣಿದಾಡಿದನೆ ರಂಗ ಉಟ್ಟಿದ್ದ ಬಟ್ಟೆಯ ಬಿಸುಟಿಹನೆ ರಂಗ ದಿಟ್ಟ ತೇಜಿಯನೇರಿ ಮೆರೆಯುವನೆ ದುಷ್ಟರನೆಲ್ಲ ಸಂಹರಿಸಿದನೆ ನಮ್ಮ ದಿಟ್ಟ ಪುರಂದರ ವಿಟ್ಟಲನೆ ಕೃಷ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು