ಏನು ಮರುಳಾದೆವ್ವ ಎಲೆ ಭಾರತಿ

ಏನು ಮರುಳಾದೆವ್ವ ಎಲೆ ಭಾರತಿ

ರಾಗ: ಹಂಸಧ್ವನಿ ತಾಳ: ಝಂಪೆ ಏನು ಮರುಳಾದೆವ್ವ ಎಲೆ ಭಾರತೀ | ನೀನರಿಯೆ ಪವನನಿಂಥವನೆಂದು |ಪ| ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು | ಎಲ್ಲರಂತಲ್ಲ ಕಪಿರೂಪ ನೋಡು ಖುಲ್ಲ ಫಲಪುಷ್ಪಯುಕ್ತ ವನವನು ಕೆಡಿಸಿದನು | ಎಲ್ಲಿಂದ ಒದಗಿದನು ಈ ಪತಿಯು ನಿನಗೆ ರಕುತವಂ ಪಾನ ಮಾಡಿದನಂತೆ ಕೇಳಿದೆಯಾ | ರಕ್ಕಸೊಬ್ಬಳು ನಿನಗೆ ಸವತಿ ಇಹಳು ಮಕ್ಕಮಾರಿ ಮಗನುಂಟು ಗಂಡನು ಓದ | ನಕ್ಕೆ ಗತಿಯಿಲ್ಲದಲೆ ಭಿಕ್ಷೆ ಬೇಡುವವನಿಗೆ ಹುಟ್ಟು ಬಡವ ತಾನಾದರೇನಾಗಲಿ | ನಿನ್ನ ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ದೃಷ್ಟಿಗೋಚರನಾಗದೆ ನರರಿಗೆ | ಪ್ರಾಣೇಶವಿಠ್ಠಲನ ಬಳಿಯಲ್ಲಿ ಬದರಿಯೊಳು ಸೇರಿದವನಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು