ಮಳೆಯ ದಯಮಾಡೋ ರಂಗ..
ರಾಗ - ಮುಖಾರಿ
ಮಳೆಯ ದಯಮಾಡೋ ರಂಗ ನಿಮ್ಮ
ಕರುಣ ತಪ್ಪಿದರೆ ಉಳಿಯದು ಲೋಕ
ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು
ದೆಶೆದೆಶೆಗೆ ಬಾಯ್ಬಿಡುತ್ತಿಹವಯ್ಯ ಹರಿಯೆ
ಧಗೆಯಾಗಿ ದ್ರವಗುಂದಿ ಇರುವ ಭಾವಿಯ ನೀರ
ಮೊಗೆಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೋ ವೃಷ್ಟಿಯನು ಹರಿಯೆ
ಸಂದುಹೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೇ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೋ
ಸಂದೇಹವ್ಯಾಕೆ ಹೆಳವನಕಟ್ಟೆಯ ರಂಗ
(ಬೇಲೂರು ಕೇಶವದಾಸರ "ಶ್ರೀ ಕರ್ನಾಟಕ ಭಕ್ತವಿಜಯ" ಪುಸ್ತಕದಲ್ಲಿ ಓದಿದ್ದು)
- Log in to post comments