ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ
(ರಾಗ: ಘಂಟಾರವ. ಆದಿ ತಾಳ.)
ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ
ಹಿಡಿ ಹೊನ್ನ ತಾ ಕೃಷ್ಣ ಎಂದಳೆ ಗೋಪಿ
ತನಯನ ಎತ್ತಿ ಸಂತೋಷದಿಂದ ಗೋಪಿ
ಮುನಿಜನ ವಂದ್ಯನ ಮುದ್ದಾಡಿಸುತ್ತ
ಚಿನ್ಮಯ ರೂಪ ವಿಚಿತ್ರದ ಬೊಂಬೆ
ನಿನ್ನ ಚೆಲುವ ಹಸ್ತವನಾಡಿಸು ಎಂದಳೆ
ತಂದೆ ನೀನೇ ಸಾರಥಿಪತಿಯೆ
ತಂದೆ ನೀನೇ ಭಾಗೀರಥಿ ಪಿತನೆ
ತಂದೆ ನೀನೇ ಭಕ್ತರ ಪಾರಿಜಾತನೆ ಎನ್ನ
ತಂದೆ ಹಸ್ತವನಾಡಿಸು ಎಂದಳೆ
ಸುರರಿಗೆ ಅಮೃತವ ನೀಡಿದ ಕರ
ನಮ್ಮ ವರಲಕ್ಷ್ಮಿಯ ನೆರೆದ ಕರ
ಗಿರಿಯನೆತ್ತಿ ಗೋಕುಲವ ಕಾಯ್ದ ಕರ ನಮ್ಮ
ವರದ ಪುರಂದರ ವಿಟ್ಠಲನ ಕರ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments