ಅವರೇ ಕಾಯ್ ಬೇಕು ಕಾಲದಿ
ಅವರೇ ಕಾಯ್ ಬೇಕು ಕಾಲದಿ
ಅವರೇ ಕಾಯ್ ಬೇಕು ||ಪ||
ಅವರೆ ಬಹುರುಚಿಯವರೆ ಸಂಪದ
ಅವರಿಂದಲಿ ಮೋಕ್ಷಾದಿ ಸಾಧನವು ||ಅ||
ಯುಕ್ತರಾಗಿ ಇರುವ ಜನರಿಗೆ
ಭುಕ್ತಿಯನು ಕೊಡುವ
ಭಕ್ತರಿಗೆಲ್ಲಾ ಬಾಯ್ಸವಿಯಾದ
ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧||
ಇವರೆಲ್ಲ ಅಳೆದು ಬಿತ್ತಿ
ವಿವರವಾಗಿ ಅಳೆದು
ತವಕದಿ ಮೂಟೆಯ ಕಟ್ಟಿಟ್ಟಿದ್ದರೆ
ಜವನವರೆಳೆಯುವ ಕಾಲಕ್ಕೊದಗುತ ||೨||
ಹಿತರಾಗಿ ಅವರೆ ಮಾತಾ-
ಪಿತರಾಗೀ ಅವರೆ
ಗತಿದಾಯಕರಾಗಿ ಅವರೆ ಭೂ-
ಸುತೆ ಗುರುರಾಮವಿಠಲರೀರ್ವರು ||೩||
--- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments