ಬುದ್ಧಿವಂತನಲ್ಲ ರಂಗನು
(ರಾಗ ಪಂತುವರಾಳಿ ಅಟತಾಳ )
ಬುದ್ಧಿವಂತನಲ್ಲ ರಂಗನು ||ಪ||
ಮುದ್ದು ಮಾಡಿ ಸಲಹಿದೆ ಗೋಪಿ ||ಅ.ಪ||
ಆವು ಕಾಯ ಹೋಗಿ ಯಮುನಾ ತೀರದಲಿ ಮ-
ಡುವ ಧುಮುಕಿ ಕಾಳಿಂಗನ ಪೆಡೆ ತುಳಿದನೆ ||
ಹೆಡೆಯ ತುಳಿದು ಹಾವಿನ ಮೇಲೆ ಮಲಗಿ
ಕಡುನಿದ್ರೆಗೈವನು ಸಾಧು ಬಾಲಕನೆ ||
ಹದ್ದನೇರಿಕೊಂಡು ಜಗವೆಲ್ಲ ತಿರುಗಿ
ಗೆದ್ದು ಬಾಹೋ ಬುದ್ಧಿ ಇವಗೇನೆ ||
ಮಾರಬಂದ ಹೆಣ್ಣು ಹೆಡಿಗೆ ಸೂರೆಗೊಂಬ
ವಾರುಣಾದಿಂದಲಿ ಬೈಸಿಕೊಂಬನೆ ||
ಗಂಡನುಳ್ಳ ಹೆಂಡರ ಕೊಂಡು ಒಯ್ದು ಅವ
ಭಂಡು ಮಾಡುವನೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments